08/05/17 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ

“ ಮಧುರ ಮಕ್ಕಳೇ- ನೀವು ಈಶ್ವರೀಯ ಪರಿವಾರದವರಾಗಿದ್ದೀರಿ ಆದ್ದರಿಂದ ಪರಸ್ಪರ ಸಹೋದರ-ಸಹೋದರರಾಗಿರುವುದು ಈಶ್ವರೀಯ ಪರಿವಾರದ ನಿಯಮವಾಗಿದೆ , ಬ್ರಾಹ್ಮಣಕುಲದ ನಿಯಮವು ಸಹೋದರ- ಸಹೋದರಿಯರಾಗಿರುವುದಾಗಿದೆ ಆದ್ದರಿಂದ ವಿಕಾರದ ದೃಷ್ಟಿಯಿರಲು ಸಾದ್ಯವಿಲ್ಲ . ”
ಪ್ರಶ್ನೆ:    ಈ ಸಂಗಮಯುಗವು ಕಲ್ಯಾಣಕಾರಿ ಯುಗವಾಗಿದೆ- ಹೇಗೆ?

ಉತ್ತರ:    ಇದೇ ಸಮಯದಲ್ಲಿ ತಂದೆಯು ತಮ್ಮ ಮುದ್ದು ಮಕ್ಕಳ ಸಮ್ಮುಖದಲ್ಲಿ ಬರುತ್ತಾರೆ ಹಾಗೂ ತಂದೆ, ಟೀಚರ್, ಸದ್ಗುರುವಿನ ಪಾತ್ರವೂ ಸಹ ಈಗಲೇ ನಡೆಯುತ್ತದೆ.ಇದೇ ಕಲ್ಯಾಣಕಾರಿ ಸಮಯವಾಗಿದೆ ಯಾವಾಗ ನೀವು ಮಕ್ಕಳು ತಂದೆಯ ಭಿನ್ನ ಮತವಿದೆ ಅದು ನರಕವನ್ನು ಸ್ವರ್ಗವನ್ನಾಗಿ ಮಾಡುವ ಹಾಗೂ ಎಲ್ಲರಿಗೆ ಸದ್ಗತಿಯನ್ನು ಕೊಡುವಂತದ್ದಾಗಿದೆ,ಅಂತಹ ಶ್ರೀಮತವನ್ನು ಅರಿತುಕೊಂಡಿದ್ದೀರಿ ಹಾಗೂ ಅದರನುಸಾರ ನಡೆಯುತ್ತೀರಿ.
ಪ್ರಶ್ನೆ:    ನಿಮ್ಮ ಸನ್ಯಾಸವು ಸತೋಪ್ರದಾನ ಸನ್ಯಾಸವಾಗಿದೆ ಹೇಗೆ?
ಉತ್ತರ:    ನಾವು ಬುದ್ದಿಯಿಂದ ಇಡೀ ಪ್ರಪಂಚವನ್ನು ಮರೆಯುತ್ತೀರಿ. ನಾವು ಈ ಸನ್ಯಾಸದಿಂದ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ, ಪವಿತ್ರರಾಗುತ್ತಾ ಮತ್ತು ವ್ರತವನ್ನಿಡುತ್ತಾ ದೇವತೆಗಳಾಗುತ್ತೀರಿ.ಅವರ ಸನ್ಯಾಸವು ಅಲ್ಪಕಾಲದ ಸನ್ಯಾಸವಾಗಿದೆ, ಬೇಹದ್ದಿನದಲ್ಲ.
ಗೀತೆ:    ಬೋಲಾನಾಥನಿಗಿಂತ ಭಿನ್ನ ಬೇರೆ ಯಾರೂ ಇಲ್ಲ............

ಓಂ ಶಾಂತಿ, ಮೊಟ್ಟ ಮೊದಲು ತಂದೆಯೇ ಮಕ್ಕಳಿಗೆ ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು.5000 ವರ್ಷದ ಮೊದಲೂ ಸಹ ತಿಳಿಸಿದ್ದರು- ಮನ್ಮನಾಭವ. ದೇಹದ ಎಲ್ಲ ಸಂಬಂಧವನ್ನು ಮರೆತು ತಮ್ಮನ್ನು ಆಶರೀರಿ ಆತ್ಮನೆಂದು ತಿಳಿಯಿರಿ.ಎಲ್ಲರೂ ತಮ್ಮನ್ನು ಅತ್ಮನೆಂದು ತಿಳಿಯುತ್ತೀರಾ? ತಮ್ಮನ್ನು ಎಂದೂ ಪರಮಾತ್ಮನೆಂದು ತಿಳಿಯುವುದಿಲ್ಲ ತಾನೆ? ಗಾಯನವಿದೆ ಪಾಪಾತ್ಮ, ಪುಣ್ಯಾತ್ಮ, ಮಹಾತ್ಮ.ಮಹಾನ್ ಪರಮಾತ್ಮನೆಂದು ಹೇಳುವುದಿಲ್ಲ.ಆತ್ಮವು ಪವಿತ್ರವಾದಾಗ ಪವಿತ್ರ ಶರೀರವೇ ಸಿಗುತ್ತದೆ.ಆತ್ಮದಲ್ಲಿಯೇ ತುಕ್ಕು ಹಿಡಿಯುತ್ತದೆ.ತಂದೆಯು ಮಕ್ಕಳಿಗೆ ಯುಕ್ತಿಯಿಂದ ತಿಳಿಸುತ್ತಾರೆ.ಇದಂತು ಅವಶ್ಯವಾಗಿದೆ- ಆತ್ಮನ ರೂಪದಲ್ಲಿ ನಾವೆಲ್ಲರೂ ಸಹೋದರ-ಸಹೋದರರಾಗುತ್ತೇವೆ ಹಾಗೂ ಶರೀರದ ಸಂಬಂಧದಲ್ಲಿ ಬಂದಾಗ ಸಹೋದರ-ಸಹೋದರಿಯರಾಗುತ್ತೇವೆ.ಯಾವಾಗ ದಂಪತಿಗಳು ಕುಳಿತಿದ್ದಾಗ ಅವರಿಗೆ ನೀವು ತಮ್ಮನ್ನು ಪರಸ್ಪರ ಸಹೋದರ-ಸಹೋದರಿ ಎಂದು ತಿಳಿಯಿರಿ ಎಂದಾಗ ಗೊಂದಲಕ್ಕೊಳಗಾಗುತ್ತಾರೆ ಆದರೆ ಇಲ್ಲಿನ ನಿಯಮವನ್ನು ತಿಳಿಸಲಾಗುತ್ತದೆ- ನಾವೆಲ್ಲಾ ಆತ್ಮರ ತಂದೆಯು ಒಬ್ಬರೇ ಆಗಿರುವುದರಿಂದ ಸಹೋದರ-ಸಹೋದರರಾದೆವು.ಮತ್ತೆ ಮನುಷ್ಯನ ಶರೀರದಲ್ಲಿ ಬಂದಾಗ ಪ್ರಜಾಪಿತ ಬ್ರಹ್ಮನ ಮುಖಾಂತರ ರಚನೆಯನ್ನು ರಚಿಸುತ್ತಾರೆ ಅಂದ ಮೇಲೆ ಅವಶ್ಯವಾಗಿ ಅವರ ಮುಖವಂಶಾವಳಿಗಳು ಪರಸ್ಪರ ಸಹೋದರ-ಸಹೋದರಿಯರಾದೆವು.ಪರಮಪಿತ ಪರಮ ಆತ್ಮ ಎಂದು ಎಲ್ಲರೂ ಹೇಳುತ್ತಾರೆ.ತಂದೆಯು ಸ್ವರ್ಗದ ರಚಯಿತನಾಗಿದ್ದಾರೆಂದರೆ ನಾವು ಅವರ ಮಕ್ಕಳಾಗಿರುವುದರಿಂದ ನಾವೇಕೆ ಸ್ವರ್ಗದ ಮಾಲೀಕರಾಗಬಾರದು! ಆದರೆ ಸ್ವರ್ಗವಂತು ಸತ್ಯಯುಗದಲ್ಲಿಯೇ ಇರುತ್ತದೆ. ತಂದೆಯು ಬಂದು ಯಾವುದೇ ಹೊಸ ಸೃಷ್ಟಿಯನ್ನು ರಚಿಸುತ್ತಾರೆಂದಲ್ಲ.ತಂದೆಯು ಬಂದು ಹಳೆಯ ಸೃಷ್ಟಿಯನ್ನು ಹೊಸದನ್ನಾಗಿ ಮಾಡುತ್ತಾರೆ ಅರ್ಥಾತ್ ಈ ವಿಶ್ವವನ್ನು ಬದಲಾಯಿಸುತ್ತಾರೆ ಅಂದ ಮೇಲೆ ಅವಶ್ಯವಾಗಿ ತಂದೆಯು ಇಲ್ಲಿಯೇ ಬರುತ್ತಾರೆ, ಭಾರತಕ್ಕೆ ಸ್ವರ್ಗದ ಆಸ್ತಿಯನ್ನು ಕೊಟ್ಟಿದ್ದಾರೆ. ಇದರ ನೆನಪಾರ್ಥವಾಗಿ ಸೋಮನಾಥ ಮಂದಿರವನ್ನು ಬಹಳ ದೊಡ್ಡದಾಗಿ ನಿರ್ಮಾಣ ಮಾಡಿದ್ದಾರೆ. ಅವಶ್ಯವಾಗಿ ಭಾರತದಲ್ಲಿ ಒಂದೇ ದೇವೀ-ದೇವತಾ ಧರ್ಮವಿತ್ತು,ಮತ್ತ್ಯಾವುದೇ ಧರ್ಮವಿರಲಿಲ್ಲ. ಇವೆಲ್ಲವೂ ನಂತರದಲ್ಲಿ ವೃದ್ದಿಯಾಗಿದೆ.ಅಂದ ಮೇಲೆ ಅವಶ್ಯವಾಗಿ ಉಳಿದೆಲ್ಲಾ ಆತ್ಮರು ನಿರ್ವಾಣಧಾಮದಲ್ಲಿ ತಂದೆಯ ಬಳಿ ಇರುತ್ತಾರೆ.ಭಾರತ ವಾಸಿಗಳು ಜೀವನ್ಮುಕ್ತರಾಗಿದ್ದರು, ಸೂರ್ಯವಂಶಿ ಮನೆತನದವರಾಗಿದ್ದರು.ಈಗ ಜೀವನ ಬಂಧನದಲ್ಲಿದ್ದಾರೆ.ಜನಕನಿಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಕ್ಕಿತೆನ್ನುವ ಉದಾಹರಣೆಯೂ ಇದೆ.ಜೀವನ್ಮುಕ್ತ ಎಂದು ಸ್ವರ್ಗಕ್ಕೆ ಹೇಳುತ್ತಾರೆ.ನಂತರ ಅದರಲ್ಲಿ ಯಾರು ಎಷ್ಟು ಪರಿಶ್ರಮ ಪಡುತ್ತಾರೆ ಅವರು ಅಂತಹ ಪದವಿಯನ್ನು ಪಡೆಯುತ್ತಾರೆ.ಜೀವನ್ಮುಕ್ತರೆಂದು ಎಲ್ಲರಿಗೂ ಹೇಳಲಾಗುತ್ತದೆ ಅಂದ ಮೇಲೆ ಖಂಡಿತವಾಗಿ ಮುಕ್ತಿ-ಜೀವನ್ಮುಕ್ತಿದಾತ ಸದ್ಗುರು ಒಬ್ಬರೇ ಇರಬೇಕಲ್ಲವೇ! ಆದರೆ ಅವರನ್ನು ಯಾರೂ ತಿಳಿದುಕೊಂಡಿಲ್ಲ. ಈಗಂತು ಎಲ್ಲರೂ ಮಾಯೆಯ ಬಂಧನದಲ್ಲಿದ್ದಾರೆ.ಈಶ್ವರನ ಗತಿ-ಮತ ಭಿನ್ನವಾಗಿದೆ ಎಂದು ಹೇಳಲಾಗುತ್ತದೆ.ಅವರ ಮತವೇ ಶ್ರೀಮತವಾಗಿದೆ.ಅವರು ಖಂಡಿತವಾಗಿ ಬರುತ್ತಾರೆ.ಅಂತ್ಯದಲ್ಲಿ ಎಲ್ಲರೂ ಸಹ ಅಹೋ ಪ್ರಭು ಎಂದು ಹೇಳುತ್ತಾರೆ.ಈಗ ನೀವು ಹೇಳುತ್ತಿದ್ದೀರಿ-ಅಹೋ ಪ್ರಭು ಈ ನರಕವನ್ನು ಸ್ವರ್ಗವನ್ನಾಗಿ ಮಾಡುವ ಈ ನಿನ್ನ ಗತಿಯು ಬಹಳ ಭಿನ್ನವಾಗಿದೆ.ನಾವು ಮತ್ತೆ ಸಹಜ ರಾಜಯೋಗವನ್ನು ಕಲಿಯುತ್ತೀದ್ದೇವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ.ಕಲ್ಪದ ಮೊದಲೂ ಸಂಗಮಯುಗದಲ್ಲಿಯೇ ಕಲಿಸಿರಬೇಕಲ್ಲವೇ! ತಂದೆಯು ಸ್ವಯಂ ಹೇಳುತ್ತಾರೆ- “ಮುದ್ದು ಮಕ್ಕಳೇ” ನಾನು ನೀವು ಮಕ್ಕಳ ಸಮ್ಮುಖದಲ್ಲಿಯೇ ಬರುತ್ತೇನೆ.ಶಿವಬಾಬಾ ಸುಪ್ರೀಂ ತಂದೆಯೂ ಆಗಿದ್ದಾರೆ, ಸುಪ್ರೀಂ ಟೀಚರ್ ಸಹ ಆಗಿದ್ದಾರೆ.ಅವರು ಜ್ಞಾನವನ್ನು ಕೊಡುತ್ತಾರೆ, ಮತ್ಯಾರೂ ಈ ಸೃಷ್ಟಿ ಚಕ್ರದ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ.ಈ ಸೃಷ್ಟಿ ಚಕ್ರದ ಆದಿ-ಮಧ್ಯ-ಅಂತ್ಯ ಹಾಗೂ ಪ್ರಪಂಚದ ಇತಿಹಾಸ-ಭೂಗೋಳವನ್ನು ಯಾರೂ ತಿಳಿದುಕೊಂಡಿಲ್ಲ.ಪರಮಪಿತ ಪರಮಾತ್ಮನು ಸ್ಥಾಪನೆ ಮತ್ತು ವಿನಾಶದ ಕಾರ್ಯವನ್ನು ಹೇಗೆ ಮಾಡಿಸುತ್ತಾರೆ ಎಂಬುದನ್ನೂ ತಿಳಿದುಕೊಂಡಿಲ್ಲ,ಈಗ ನೀವು ಮಕ್ಕಳು ಅರಿತುಕೊಂಡಿದ್ದೀರಿ.ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು.ಈ ಮಹಿಮೆಯು ತಂದೆಯದೇ ಆಗಿದೆ.ಕೊಳಕಾಗಿರುವ ವಸ್ತ್ರವನ್ನು ಸ್ವಚ್ಛಗೊಳಿಸುವವರು ತಂದೆಯಾಗಿದ್ದಾರೆ.ಈಗ ತಮ್ಮೊಂದಿಗೆ ತಾವು ಕೇಳಿಕೊಳ್ಳಿ- ನಾವು ಕೊಳಕಾಗಿದ್ದೇವೆಯೇ ಅಥವಾ ಪವಿತ್ರವಾಗಿದ್ದೇವೆಯೇ? ಅಕಾಲ ಸಿಂಹಾಸನವಿದೆಯಲ್ಲವೇ! ಅಕಾಲ ಮೂರ್ತ ಎಂದಾಗ ಅವರ ಸಿಂಹಾಸನವು ಎಲ್ಲಿದೆ? ಅದಂತು ಅವಶ್ಯವಾಗಿ ಪರಮಧಾಮ ಅಥವಾ ಬ್ರಹ್ಮ ಮಹಾ ತತ್ವವಾಗಿದೆ.ನಾವು ಆತ್ಮರೆಲ್ಲರೂ ಅಲ್ಲಿಯೇ ಇರುತ್ತೇವೆ.ಅದನ್ನೇ ಅಕಾಲ ಸಿಂಹಾಸನ ಎಂದು ಹೇಳಲಾಗುತ್ತದೆ.ಅಲ್ಲಿ ಯಾರೂ ಬರಲು ಸಾಧ್ಯವಿಲ್ಲ. ಆ ಸ್ವೀಟ್ ಹೋಂ ನಲ್ಲಿ ನಾವೇ ಇರುತ್ತೇವೆ ಮತ್ತು ತಂದೆಯು ಅಲ್ಲಿಯೇ ಇರುತ್ತಾರೆ.ಬಾಕಿ ಅಲ್ಲಿ ಯಾವುದೇ ಸಿಂಹಾಸನ ಅಥವಾ ಕುರ್ಚಿ ಮುಂತಾದವುಗಳಿಲ್ಲ ಏಕೆಂದರೆ ಅಲ್ಲಿ ಅಶರೀರಿಯಾಗಿರುತ್ತೇವೆ ಅಲ್ಲವೆ ಅಂದ ಮೇಲೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ ಅರ್ಥಾತ್ ಯೋಗ್ಯರಾಗುತ್ತೇವೆ ಎನ್ನುವುದನ್ನು ತಿಳಿಸಬೇಕಾಗಿದೆ.
ತಂದೆಯೂ ಹೇಳುತ್ತಾರೆ- ಮಕ್ಕಳೇ, ಶಿವ ತಂದೆಯನ್ನು ನೆನಪು ಮಾಡಿ, ವಿಷ್ಣುಪುರಿಯನ್ನು ನೆನಪು ಮಾಡಿ.ಈಗ ನೀವು ಬ್ರಹ್ಮಪುರಿಯಲ್ಲಿ ಕುಳಿತಿದ್ದೀರಿ.ಬ್ರಹ್ಮನ ಸಂತಾನರಾಗಿದ್ದೀರಿ ಮತ್ತು ಶಿವ ತಂದೆಯ ಮಕ್ಕಳೂ ಆಗಿದ್ದೀರಿ.ಒಂದು ವೇಳೆ ತಮ್ಮನ್ನು ಸಹೋದರ-ಸಹೋದರಿಯರೆಂದು ತಿಳಿದುಕೊಳ್ಳದಿದ್ದರೆ ಕಾಮ ವಿಕಾರದಲ್ಲಿ ಹೋಗಿ ಬಿಡುತ್ತೀರಿ.ಇದು ಈಶ್ವರೀಯ ಪರಿವಾರವಾಗಿದೆ.ಮೊದಲು ನೀವು ಕುಳಿತಿದ್ದೀರಿ, ದಾದಾರವರೂ ಕುಳಿತಿದ್ದಾರೆ ಮತ್ತು ಬಾಬಾರವರೂ ಇದ್ದಾರೆ.ನೀವು ಅವರ ಮಕ್ಕಳಾಗಿರುವ ಕಾರಣ ನೀವು ಬ್ರಹ್ಮನ ಮುಖಾಂತರ ಶಿವಬಾಬಾರವರ ಸಂತಾನರಾಗಿದ್ದೀರಿ.ಶಿವನ ಮೊಮ್ಮಕ್ಕಳೂ ಆಗಿದ್ದೀರಿ.ಮನುಷ್ಯನ ಶರೀರದಲ್ಲಿರುವುದರಿಂದ ಸಹೋದರ-ಸಹೋದರಿಯಾಗಿದ್ದೀರಿ. ಈ ಸಮಯದಲ್ಲಿ ನೀವು ಪ್ರತ್ಯಕ್ಷದಲ್ಲಿ ಸಹೋದರ-ಸಹೋದರಿಯರಾಗಿದ್ದೀರಿ.ಇದು ಬ್ರಾಹ್ಮಣ ಕುಲವಾಗಿದೆ.ಇದನ್ನು ಬುದ್ಧಿಯಿಂದ ತಿಳಿದುಕೊಳ್ಳುವ ಮಾತಾಗಿದೆ.ಜೀವನ್ಮುಕ್ತಿಯಂತು ಸೆಕೆಂಡಿನಲ್ಲಿ ಸಿಗುತ್ತದೆ ಆದರೆ ಅದರಲ್ಲಿ ಅನೇಕ ಪದವಿಗಳಿವೆ.ಅಲ್ಲಿ ದುಃಖ ಕೊಡುವಂತಹ ಮಾಯೆಯು ಇರುವುದಿಲ್ಲ.ಸತ್ಯಯುಗದಿಂದ ಕಲಿಯುಗದ ತನಕ ರಾವಣನನ್ನು ಸುಡುತ್ತಾ ಇರುತ್ತಾರೆ ಎನ್ನುವಂತಲ್ಲ. ಇದು ಅಸಂಭವವಾಗಿದೆ.ಸ್ವರ್ಗದಲ್ಲಿ ಅಸುರರೆಲ್ಲಿಂದ ಬಂದರು? ಇದು ಆಸುರಿ ಸಂಪ್ರದಾಯವೆಂದು ತಂದೆಯು ತಿಳಿಸುತ್ತಾರೆ ಆದ್ದರಿಂದಲೇ ಅವರ ಹೆಸರುಗಳನ್ನು ಅಕಾಸುರ, ಬಕಾಸುರ ಎಂದು ಇಟ್ಟಿದ್ದಾರೆ.ಹೇಳುತ್ತಾರೆ- ಕೃಷ್ಣನು ಗೋವುಗಳನ್ನು ಮೇಯಿಸಿದನು, ಈ ಪಾತ್ರವು ನಡೆದಿದೆ ಏಕೆಂದರೆ ನೀವು ಶಿವಬಾಬಾನ ಗೋವುಗಳಾಗಿದ್ದೀರಲ್ಲವೇ.ಶಿವ ತಂದೆಯು ಎಲ್ಲರಿಗೆ ಜ್ಞಾನದ ಹುಲ್ಲನ್ನು ತಿನ್ನಿಸಿ ಪಾಲನೆ ಪೋಷಣೆ ಮಾಡುವವರಾಗಿದ್ದಾರೆ.ಮನುಷ್ಯರು ಮಂದಿರಗಳಲ್ಲಿ ಹೋಗಿ ದೇವತೆಗಳ ಮುಂದೆ ತಾವು ಸರ್ವಗುಣ ಸಂಪನ್ನರು ಮತ್ತು ನಾವು ನೀಚರು, ಪಾಪಿಗಳಾಗಿದ್ದೇವೆಂದು ಮಹಿಮೆ ಮಾಡುತ್ತಾರೆ.ತಮ್ಮನ್ನು ದೇವತೆಯೆಂದು ಹೇಳಲಾಗುವುದಿಲ್ಲ ಆದ್ದರಿಂದ ಹಿಂದುಗಳೆಂದು ಹೇಳುತ್ತಾರೆ. ಮೂಲ ಹೆಸರು ಭಾರತವಾಗಿದೆ.ಗೀತೆಯಲ್ಲಿಯೂ ಯಧಾ-ಯಧಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ...ಗೀತೆಯಲ್ಲಿ ಹಿಂದೂಸ್ಥಾನ ಎಂದು ಹೇಳಿಲ್ಲ.ಇದು ಭಗವಾನುವಾಚ ಆಗಿದೆ.ಭಗವಂತ ನಿರಾಕಾರನಾಗಿದ್ದಾರೆ.ಇದನ್ನು ಎಲ್ಲರೂ ಒಪ್ಪುತ್ತಾರೆ.ಸ್ವರ್ಗದಲ್ಲಿ ಎಲ್ಲರೂ ದೈವೀ ಗುಣವುಳ್ಳ ಮನುಷ್ಯರಿರುತ್ತಾರೆ.ಅವರೇ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗಿದೆ ಅಂದಾಗ ಅವಶ್ಯವಾಗಿ ಸ್ವರ್ಗದಿಂದ ನರಕದಲ್ಲಿ ಬರುತ್ತಾರೆ.ತಾವೇ ಪೂಜ್ಯ, ತಾವೇ ಪೂಜಾರಿ.ನಂಬರ್ ವನ್ ಪೂಜ್ಯ ಶ್ರೀ ಕೃಷ್ಣನಾಗಿದ್ದಾನೆ.ಕಿಶೋರ್ ಅವಸ್ಥೆಗೆ ಸತೋಪ್ರಧಾನ ಎಂದು ಹೇಳಲಾಗುತ್ತದೆ.ಬಾಲ್ಯಾವಸ್ಥೆಗೆ ಸತೋ, ಯೌವನಾವಸ್ಥೆಗೆ ರಜೋ, ವೃಧಾವಸ್ಥೆಗೆ ತಮೋ ಎಂದು ಹೇಳಲಾಗುತ್ತದೆ.ಸೃಷ್ಟಿಯೂ ಸಹ ಸತೋ, ರಜೋ ತಮೋ ಆಗುತ್ತದೆ.ಕಲಿಯುಗದ ನಂತರ ಮತ್ತೆ ಸತ್ಯಯುಗವು ಬರಬೇಕು.ತಂದೆಯು ಸಂಗಮದಲ್ಲಿಯೇ ಬರುತ್ತಾರೆ.ಇದು ಅತಿ ಕಲ್ಯಾಣಕಾರಿ ಯುಗವಾಗಿದೆ.ಇಂತಹ ಯುಗವು ಮತ್ತ್ಯಾವುದೂ ಇಲ್ಲ.ಸತ್ಯಯುಗದಿಂದ ತ್ರೇತಾದಲ್ಲಿ ಬರುತ್ತಾರೆಂದರೆ ಆ ತ್ರೇತಾಯುಗವನ್ನು ಕಲ್ಯಾಣಕಾರಿ ಯುಗವೆಂದು ಹೇಳುವುದಿಲ್ಲ ಏಕೆಂದರೆ ಎರಡು ಕಲೆಗಳು ಕಡಿಮೆಯಾಗಿರುವುದರಿಂದ ಅದಕ್ಕೆ ಕಲ್ಯಾಣಕಾರಿ ಯುಗ ಎಂದು ಹೇಗೆ ಹೇಳಲಾಗುತ್ತದೆ! ನಂತರ ದ್ವಾಪರದಲ್ಲಿ ಬಂದಾಗ ಕಲೆಗಳು ಇನ್ನೂ ಕಡಿಮೆಯಾಗುತ್ತಾ ಹೋಗುತ್ತದೆ ಆದ್ದರಿಂದ ಅದೂ ಸಹ ಕಲ್ಯಾಣಕಾರಿ ಯುಗವಾಗುವುದಿಲ್ಲ.ಕಲ್ಯಾಣಕಾರಿ ಈ ಸಂಗಮಯುಗವಾಗಿದೆ.ತಂದೆಯು ಇಡೀ ಪ್ರಪಂಚವನ್ನು ಅದರಲ್ಲೂ ವಿಶೇಷವಾಗಿ ಭಾರತಕ್ಕೆ ಗತಿ-ಸದ್ಗತಿಯನ್ನು ಕೊಡುತ್ತಾರೆ.ಈಗ ನೀವು ಸ್ವರ್ಗಕ್ಕೋಸ್ಕರ ಪುರುಷಾರ್ಥವನ್ನು ಮಾಡುತ್ತಿದ್ದೀರಿ.ದೇವೀ-ದೇವತಾ ಧರ್ಮವೇ ಸುಖ ಕೊಡುವುದಾಗಿದೆ ಎಂದು ತಂದೆಯೇ ಹೇಳುತ್ತಾರೆ.ನೀವು ತಮ್ಮ ಧರ್ಮವನ್ನು ಮರೆತಿದ್ದೀರಿ.ಆದ್ದರಿಂದಲೇ ಅನ್ಯ ಧರ್ಮಗಳಲ್ಲಿ ಹೊರಟು ಹೋಗುತ್ತೀರಿ.ವಾಸ್ತವದಲ್ಲಿ ನಿಮ್ಮ ಧರ್ಮವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ.ಈಗ ನೀವು ಮತ್ತೆ ಅದೇ ರಾಜಯೋಗವನ್ನು ಕಲಿಯುತ್ತಿದ್ದೀರೆಂದರೆ ಶ್ರೀಮತದನುಸಾರ ನಡೆಯಬೇಕಾಗುವುದು. ಉಳಿದೆಲ್ಲರೂ ಆಸುರಿ ರಾವಣನ ಮತದ ಮೇಲಿದ್ದಾರೆ.ಎಲ್ಲರಲ್ಲಿ 5 ವಿಕಾರಗಳಿವೆ, ಅದರಲ್ಲೂ ಮೊದಲನೆಯದು ಅಶುದ್ಧ ಅಹಂಕಾರವಗಿದೆ.ತಂದೆಯು ಹೇಳುತ್ತಾರೆ- ದೇಹದ ಅಹಂಕಾರವನ್ನು ಬಿಟ್ಟು ದೇಹೀ ಅಭಿಮಾನಿಯಾಗಿ, ಅಶರೀರಿಯಾಗಿ.ನೀವು ನಾನು ತಂದೆಯನ್ನು ಮರೆತು ಬಿಟ್ಟಿದ್ದೀರಿ.ಇದು ಮರೆತು, ಮರೆಯಿಸುವಂತಹ ಆಟವಾಗಿದೆ.ಕೆಲವರು ಕೆಳಗೆ ಇಳಿಯಲೇ ಬೇಕಾಗಿರುವುದರಿಂದ ಮತ್ತೆ ಪುರುಷಾರ್ಥವನ್ನೇಕೆ ಮಾಡಬೇಕೆಂದು ಹೇಳುತ್ತಾರೆ.ಅರೇ! ಪುರುಷಾರ್ಥ ಮಾಡದಿದ್ದರೆ ಸ್ವರ್ಗದ ಆಸ್ತಿಯು ಹೇಗೆ ಸಿಗುತ್ತದೆ! ನಾಟಕವನ್ನು ತಿಳಿದುಕೊಳ್ಳಬೇಕಾಗಿದೆ.ಇದು ಒಂದೇ ಸೃಷ್ಟಿಯಾಗಿದೆ.ಈ ಸೃಷ್ಟಿ ಚಕ್ರವು ಸುತ್ತುತ್ತದೆ.ಸತ್ಯಯುಗವೂ ಸತ್ಯವಾಗಿದೆ, ಆಗಿರುವುದು ಸತ್ಯ, ಆಗದೇ ಇರುವುದು ಸತ್ಯ...ಹೇಳುತ್ತಾರೆ ಪ್ರಪಂಚದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತದೆ ಅಂದ ಮೇಲೆ ಇದು ಯಾವಾಗ ಪ್ರಾರಂಭವಾಗುತ್ತದೆ? ಹೇಗೆ ಪುನರಾವರ್ತನೆ ಆಗುತ್ತದೆ? ಇದಕ್ಕೋಸ್ಕರವೇ ನೀವು ಪುರುಷಾರ್ಥ ಮಾಡುತ್ತೀರಿ.ತಂದೆಯು ಹೇಳುತ್ತಾರೆ- ಪುನಃ ನಿಮಗೆ ರಾಜಯೋಗವನ್ನು ಕಲಿಸಲು ಬಂದಿದ್ದೇನೆ.ನೀವೂ ಕಲಿಯುತ್ತೀರಿ, ರಾಜಧಾನಿಯು ಸ್ಥಾಪನೆಯಾಗುವುದು.ಯಾದವರು-ಕೌರವರು ಸಮಾಪ್ತಿಯಾಗುತ್ತಾರೆ, ಪಾಂಡವರಿಗೆ ಜಯ-ಜಯಕಾರವಾಗುತ್ತದೆ ನಂತರ ಮುಕ್ತಿ-ಜೀವನ್ಮುಕ್ತಿಯ ದ್ವಾರವು ತೆರೆಯುತ್ತದೆ.ಇಲ್ಲದಿದ್ದರೆ ಅಲ್ಲಿಯ ತನಕ ಮಾರ್ಗವು ಬಂಧ್ ಆಗಿರುತ್ತದೆ.ಯಾವಾಗ ಯುದ್ಧವು ಪ್ರಾರಂಭವಾಗುವುದು ಆಗಲೇ ದ್ವಾರವೂ ತೆರೆಯುತ್ತದೆ.ತಂದೆಯು ಬಂದು ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆ.ಅವರು ಮುಕ್ತಿದಾತನೂ ಆಗಿದ್ದಾರೆ.ಮಾಯೆಯ ಜಾಲದಿಂದ ಬಿಡಿಸುತ್ತಾರೆ.ಗುರುಗಳ ಬಂಧನಗಳಲ್ಲಿ ಅನೇಕರು ಸಿಕ್ಕಿ ಹಾಕಿಕೊಂಡಿದ್ದಾರೆ.ತುಂಬಾ ಹೆದರುತ್ತಾರೆ- ಗುರುಗಳ ಆಜ್ಞೆಯನ್ನು ಒಪ್ಪದೆ ಇದ್ದರೆ ಎಲ್ಲಿ ಶಾಪ ಕೊಟ್ಟು ಬಿಡುತ್ತಾರೋ ಎಂದು ತಿಳಿಯುತ್ತಾರೆ.ಅರೇ! ನೀವು ಆಜ್ಞೆಯನ್ನು ಎಲ್ಲಿ ಒಪ್ಪುತ್ತೀರಿ.ಅವರು ನಿರ್ವಿಕಾರಿ ಪವಿತ್ರ ಮತ್ತು ನೀವು ವಿಕಾರಿ ಅಪವಿತ್ರರಾಗಿದ್ದೀರಿ.ಗುರುಗಳಲ್ಲಿ ಮನುಷ್ಯರಿಗೆ ಎಷ್ಟೊಂದು ಭಾವನೆ ಇರುತ್ತದೆ.ಗುರುಗಳು ಏನು ಮಾಡುತ್ತಾರೋ ಏನಿಲ್ಲವೋ ಗೊತ್ತಿಲ್ಲ.ಆದರೂ ಸಹ ಭಕ್ತಿ ಮಾರ್ಗದ ಪ್ರಭಾವವಿದೆ.ಈಗ ನೀವು ಬುದ್ಧಿವಂತ ಸುಪುತ್ರರಾಗಿದ್ದೀರಿ.ಬ್ರಹ್ಮಾ, ವಿಷ್ಣು, ಶಂಕರರು ಸೂಕ್ಷ್ಮವತನವಾಸಿಗಳಾಗಿದ್ದರೆಂದು ನೀವೇ ತಿಳಿದುಕೊಂಡಿದ್ದೀರಿ.ಅದರಲ್ಲಿಯೂ ಬ್ರಹ್ಮಾ ಸೋ ವಿಷ್ಣುವಿನ ಪಾತ್ರ ಇಲ್ಲಿದೆ.ಶಂಕರನಿಗೆ ಇಲ್ಲಿ ಬರುವ ಅವಶ್ಯಕತೆ ಇಲ್ಲ.ಇಲ್ಲಿ ಜಗದಾಂಬಾ, ಜಗತ್ಪಿತ ಮತ್ತು ನೀವು ಮಕ್ಕಳಿದ್ದೀರಿ.ಇಷ್ಟು ಭುಜಗಳುಳ್ಳ ದೇವಿಯರು ಮುಂತಾದವರನ್ನು ಕುಳಿತು ಹೇಗೆ ಮಾಡುತ್ತಾರೆ? ಲೆಕ್ಕವಿಲ್ಲದಷ್ಟು ಚಿತ್ರಗಳಿವೆ.ಈ ಎಲ್ಲಾ ಚಿತ್ರಗಳು ಭಕ್ತಿ ಮಾರ್ಗಕ್ಕೋಸ್ಕರವೇ ಇದೆ.ಮನುಷ್ಯರಂತೂ ಮನುಷ್ಯರೇ ಆಗಿದ್ದಾರೆ.ರಾಧೆ ಕೃಷ್ಣ ಮುಂತಾದವರಿಗೂ ಸಹ ನಾಲ್ಕು ಭುಜಗಳನ್ನು ತೋರಿಸಿದ್ದಾರೆ.ದೀಪಾವಳಿಯಲ್ಲಿ ಮಹಾಲಕ್ಷ್ಮೀಯ ಪೂಜೆಯನ್ನು ಮಾಡುತ್ತಾರೆ.ಅವರ ಎರಡು ಭುಜಗಳು ಲಕ್ಷ್ಮಿ, ಎರಡು ಭುಜಗಳು ನಾರಾಯಣನದಾಗಿದೆ.ಇಬ್ಬರಿಗೂ ಕಂಬೈಂಡ್ ರೂಪದಲ್ಲಿ ಪೂಜೆ ಆಗುತ್ತದೆ.ಇದು ಪ್ರವೃತ್ತಿ ಮಾರ್ಗವಾಗಿದೆ, ಬೇರೆ ಇನ್ನೇನೂ ಇಲ್ಲ.ಕಾಳಿಯ ನಾಲಿಗೆಯನ್ನು ಹೇಗೆ ತೋರಿಸುತ್ತಾರೆ.ಕೃಷ್ಣನನ್ನು ಕಪ್ಪಾಗಿ ತೋರಿಸಿ ಬಿಡುತ್ತಾರೆ.ವಾಮ ಮಾರ್ಗದಲ್ಲಿ ಹೋಗುವ ಕಾರಣ ಕಪ್ಪಾಗಿ ಬಿಡುತ್ತಾರೆ ಮತ್ತೆ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಸುಂದರವಾಗುತ್ತಾರೆ.ಜಗದಂಬಾ ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುವಂತಹ ಮಧುರ ಮಮ್ಮಾ ಆಗಿದ್ದಾರೆ, ಅವರ ಮೂರ್ತಿಯನ್ನು ಕಪ್ಪಾಗಿ ಮಾಡಿದ್ದಾರೆ.ಎಷ್ಟೊಂದು ದೇವಿಯರನ್ನು ಮಾಡುತ್ತಾರೆ.ಪೂಜೆ ಮಾಡಿದ ನಂತರ ಸಮುದ್ರದಲ್ಲಿ ಮುಳುಗಿಸಿ ಬಿಡುತ್ತಾರೆ ಅಂದಾಗ ಇದು ಗೊಂಬೆಗಳ ಪೂಜೆಯಾಯಿತಲ್ಲವೇ. ತಂದೆಯು ತಿಳಿಸುತ್ತಾರೆ- ಇದೆಲ್ಲವೂ ನಾಟಕದಲ್ಲಿ ನಿಗದಿಯಾಗಿದೆ, ಇದು ಪುನಃ ಆಗುವುದು. ಭಕ್ತಿ ಮಾರ್ಗವೂ ಸಹ ಬಹಳ ವಿಸ್ತಾರವಾಗಿದೆ.ಎಷ್ಟೊಂದು ಮಂದಿರ, ಎಷ್ಟೊಂದು ಚಿತ್ರಗಳು, ಶಾಸ್ತ್ರ ಮುಂತಾದವುಗಳಿವೆ.ಸಮಯವು ವ್ಯರ್ಥ, ಹಣವೂ ವ್ಯರ್ಥ.ಮನುಷ್ಯರು ಈ ಸಮಯದಲ್ಲಿ ಸಂಪೂರ್ಣವಾಗಿ ಕನಿಷ್ಠ ಬುದ್ಧಿಯವರಾಗಿದ್ದಾರೆ.ಕವಡೆಯ ಸಮಾನರಾಗಿ ಬಿಟ್ಟಿದ್ದಾರೆ.ತಂದೆಯು ತಿಳಿಸುತ್ತಾರೆ- ಈಗ ಭಕ್ತಿ ಮಾರ್ಗದ ಬಹಳ ಪೆಟ್ಟನ್ನು ಅನುಭವಿಸಿದ್ದೀರಿ ಆದ್ದರಿಂದ ನಿಮ್ಮನ್ನು ಈ ಜಂಜಾಟದಿಂದ ಬಿಡಿಸುತ್ತೇನೆ.ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಮತ್ತು ಅವಶ್ಯವಾಗಿ ಪವಿತ್ರರಾಗಿ.ವ್ರತವನ್ನು ಇಡಬೇಕಾಗಿದೆ.ಇಲ್ಲದಿದ್ದರೆ ಎಂತಹ ಅನ್ನವೋ ಅಂತಹ ಮನಸ್ಸಾಗಿ ಬಿಡುತ್ತದೆ.ಸನ್ಯಾಸಿಗಳೂ ಸಹ ಗೃಹಸ್ಥಿಗಳ ಬಳಿ ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ.ಇದು ರಜೋಪ್ರಧಾನ ಸನ್ಯಾಸವಾಗಿದೆ.ನಮ್ಮದು ಸತೋಪ್ರಧಾನ ಸನ್ಯಾಸವಾಗಿದೆ.ನಾವು ಮಕ್ಕಳು ಹಳೆಯ ಪ್ರಪಂಚದ ಸನ್ಯಾಸವನ್ನು ಮಾಡುತ್ತೇವೆ, ಈ ಸನ್ಯಾಸದಲ್ಲಿಯೇ ಶಕ್ತಿಯಿದೆ.ರಾಷ್ಟ್ರಪತಿಯೂ ಸಹ ಗುರುಗಳ ಮುಂದೆ ಹೋಗಿ ತಲೆಬಾಗುತ್ತಾರೆ.ಭಾರತವೂ ಪವಿತ್ರವಾಗಿತ್ತು.ಇದರ ಮಹಿಮೆಯ ಗಾಯನ ಮಾಡಲಾಗಿದೆ.ಭಾರತ ವಾಸಿಗಳು ಸರ್ವಗುಣ ಸಂಪನ್ನರಾಗಿದ್ದರು.ಈಗಂತೂ ಸಂಪೂರ್ಣ ವಿಕಾರಿಯಾಗಿದ್ದಾರೆ.ದೇವತೆಗಳ ಮಂದಿರಗಳಿಗೆ ಹೋಗುತ್ತಾರೆಂದರೆ ಅವಶ್ಯವಾಗಿ ಆ ಧರ್ಮದವರಾದರು.ಗುರುನಾನಕನ ಮಂದಿರಗಳಿಗೆ ಹೋಗುತ್ತಾರೆಂದರೆ ಅವರು ಅವಶ್ಯವಾಗಿ ಸಿಖ್ಖ್ ಧರ್ಮದವರಾದರಲ್ಲವೇ ಆದರೆ ಇವರೆಲ್ಲರೂ ತಮ್ಮನ್ನು ದೇವತಾ ಧರ್ಮದವರೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಪವಿತ್ರರಾಗಿಲ್ಲ.
ನಾನು ಪುನಃ ಶಿವಾಲಯವನ್ನಾಗಿ ಮಾಡಲು ಬಂದಿದ್ದೇನೆಂದು ತಂದೆಯು ತಿಳಿಸುತ್ತಾರೆ.ಸ್ವರ್ಗದಲ್ಲಿ ಕೇವಲ ದೇವೀ-ದೇವತೆಗಳೇ ಇರುತ್ತಾರೆ.ಈ ಜ್ಞಾನವು ನಂತರ ಪ್ರಾಯಃ ಲೋಪವಾಗುತ್ತದೆ.ಗೀತಾ, ರಾಮಾಯಣ ಮುಂತಾದವೆಲ್ಲವೂ ಸಮಾಪ್ತಿಯಾಗುವುದಿದೆ.ಡ್ರಾಮಾನುಸಾರ ಮತ್ತೆ ತಮ್ಮ ಸಮಯದಲ್ಲಿ ಬರುತ್ತವೆ.ಇವೆಲ್ಲಾ ತಿಳಿದುಕೊಳ್ಳುವ ಮಾತುಗಳಾಗಿವೆ.ಇದು ಮನುಷ್ಯರಿಂದ ದೇವತೆಯನ್ನಾಗಿ ಮಾಡುವ ಪಾಠ ಶಾಲೆಯಾಗಿದೆ ಆದರೆ ಮನುಷ್ಯರು ಮನುಷ್ಯರಿಗೆ ಎಂದೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ.ಅಲ್ಪಕಾಲದ ಸುಖವನ್ನಂತು ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಕೊಡುತ್ತಿರುತ್ತಾರೆ.ಇಲ್ಲಿ ಅಲ್ಪಕಾಲದ ಸುಖವಿದೆ, ಉಳಿದಂತೆ ದುಃಖವೇ ದುಃಖವಿದೆ.ಸತ್ಯಯುಗದಲ್ಲಿ ದುಃಖದ ಹೆಸರೇ ಇರುವುದಿಲ್ಲ.ಹೆಸರೇ ಸ್ವರ್ಗ, ಸುಖಧಾಮ ಆಗಿದೆ.ಸ್ವರ್ಗದ ಹೆಸರು ಎಷ್ಟು ಪ್ರಸಿದ್ಧವಾಗಿದೆ.ತಂದೆಯು ಹೇಳುತ್ತಾರೆ- ಮಕ್ಕಳೇ, ಭಲೇ ಗೃಹಸ್ಥ ವ್ಯವಹಾರದಲ್ಲಿ ಇರಿ ಆದರೆ ಈ ಅಂತಿಮ ಜನ್ಮದಲ್ಲಿ ಬಾಬಾ ನಾವು ತಮ್ಮ ಮಗುವಾಗಿದ್ದೇವೆಂದು ತಂದೆಯೊಂದಿಗೆ ಪ್ರತಿಜ್ಞೆ ಮಾಡಿ.ಈ ಅಂತಿಮ ಜನ್ಮದಲ್ಲಿ ಅವಶ್ಯವಾಗಿ ಪವಿತ್ರರಾಗಿ, ಪವಿತ್ರ ಪ್ರಪಂಚದ ಆಸ್ತಿಯನ್ನು ಪಡೆಯುತ್ತೇನೆಂದು ಪ್ರತಿಜ್ಞೆ ಮಾಡಬೇಕಾಗಿದೆ.ತಂದೆಯನ್ನು ನೆನಪು ಮಾಡುವುದು ತುಂಬಾ ಸಹಜವಾಗಿದೆ.
ಒಳ್ಳೆಯದು -
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.ಆತ್ಮೀಯ ತಂದೆ ಆತ್ಮೀಯ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ದೇಹದ ಅಹಂಕಾರವನ್ನು ಬಿಟ್ಟು ದೇಹೀ-ಅಭಿಮಾನಿಯಾಗಬೇಕು.ಅಶರೀರಿಯಾಗುವಂತಹ ಅಭ್ಯಾಸ ಮಾಡಬೇಕಾಗಿದೆ.
2. ನಾಟಕವನ್ನು ಯಥಾರ್ಥ ರೀತಿಯಲ್ಲಿ ಅರಿತುಕೊಂಡು ಪುರುಷಾರ್ಥ ಮಾಡಬೇಕಾಗಿದೆ. ಡ್ರಾಮಾದಲ್ಲಿದ್ದರೆ ಮಾಡುತ್ತೇವೆ, ಈ ರೀತಿ ಯೋಚಿಸಿ ಪುರುಷಾರ್ಥ ಹೀನರಾಗಬಾರದು.
ವರದಾನ:   
ಕಲ್ಯಾಣಕಾರಿ ಸಮಯದ ಸ್ಮ್ರು ತಿಯಿಂದ ತಮ್ಮ ಭವಿಷ್ಯವನ್ನು ತಿಳಿದಿರುವಂತಹ ಮಾಸ್ಟರ್ ತ್ರಿಕಾಲದರ್ಶಿ ಭವ .
ಒಂದು ವೇಳೆ ಯಾರಾದರೂ ನಿಮ್ಮನ್ನು ನಿಮ್ಮ ಭವಿಷ್ಯ ಏನು? ಎಂದು ಕೇಳಿದರೆ ಹೇಳಿ ನಮಗೆ ಗೊತ್ತು-ಭವಿಷ್ಯ ಬಹಳ ಚೆನ್ನಾಗಿದೆ ಏಕೆಂದರೆ ನಮಗೆ ತಿಳಿದಿದೆ ನಾಳೆ ಏನಾಗುವುದು ಅದು ತುಂಬಾ ಚೆನ್ನಾಗಿರುವುದು, ಏನಾಯಿತು ಅದೂ ಚೆನ್ನಾಗಿತ್ತು, ಏನಾಗುತ್ತಿದೆ ಅದು ಇನ್ನೂ ಚೆನ್ನಾಗಿದೆ ಏನು ಆಗ ಬೇಕಿದೆ ಅದು ಇನ್ನೂ ಬಹಳ ಚೆನ್ನಾಗಿ ಆಗುತ್ತೆ.ಯಾರು ಮಾಸ್ಟರ್ ತ್ರಿಕಾಲದರ್ಶಿ ಮಕ್ಕಳಿದ್ದಾರೆ ಅವರಿಗೆ ನಿಶ್ಚಯವಿರುತ್ತದೆ ಇದು ಕಲ್ಯಾಣಕಾರಿ ಸಮಯವಾಗಿದೆ, ತಂದೆ ನಮ್ಮ ಕಲ್ಯಾಣಕಾರಿಯಾಗಿದ್ದಾರೆ ಮತ್ತು ನಾವು ವಿಶ್ವಕಲ್ಯಾಣಕಾರಿಗಳಾಗಿದ್ದಾಗ ನಮ್ಮ ಅಕಲ್ಯಾಣ ಆಗಲು ಸಾಧ್ಯವೇ ಇಲ್ಲ.
ಸ್ಲೋಗನ್:   

ಸಮಾಪ್ತಿಯ ಸಮಯವನ್ನು ಸಮೀಪ ತರಬೇಕಾದರೆ ಸಂಪೂರ್ಣರಾಗುವ ಪುರುಷಾರ್ಥ ಮಾಡಿ.

No comments:

Post a Comment